ಮಹಾದೇವಿ ವರ್ಮಾ 1907, ಜ್ಞಾನಪೀಠ ಪ್ರಶಸ್ತಿ ವಿಜೇತರು. ಆಧುನಿಕ ಹಿಂದಿ ರಮ್ಯವಾದಿ (ಛಾಯವಾದಿ) ಕಾವ್ಯ ಪ್ರವರ್ತಕರಲ್ಲಿ ಒಬ್ಬರು. ಹುಟ್ಟಿದ್ದು ಉತ್ತರ ಭಾರತದ ಸುಸಂಸ್ಕøತ ಕುಟುಂಬ ಒಂದರಲ್ಲಿ. ವಿದ್ಯಾ ಪ್ರೇಮಿಗಳಾದ ಇವರ ತಂದೆತಾಯಿಗಳು ಮಗಳ ಓದು ಬರೆಹದ ಬಗ್ಗೆ ತುಂಬ ಆಸಕ್ತಿ ವಹಿಸಿದರು. ಇಂದೂರಿನಲ್ಲಿ ಇವರ ಪ್ರಾರಂಭಿಕ ಶಿಕ್ಪಣವಾಯಿತು. ಹನ್ನೆರಡನೆಯ ವಯಸ್ಸಿನಲ್ಲಿ ಸ್ವರೂಪನಾರಾಯಣ ವರ್ಮಾ ಅವರ ಜೊತೆಗೆ ವಿವಾಹವಾಯಿತು. ಆದರೆ ದಾಂಪತ್ಯ ಜೀವನ ಪ್ರಯಾಗದಲ್ಲಿ ಡಿಗ್ರಿ ಮುಗಿಸಿ ಸಂಸ್ಕøತ ಮತ್ತು ತತ್ತ್ವಶಾಸ್ತ್ರದಲ್ಲಿ ಎಂ.ಎ., ಪದವಿ ಪಡೆದರು. ಮುಂದೆ ಪ್ರಯಾಗ ಮಹಿಳಾ ವಿದ್ಯಾಪೀಠದಲ್ಲಿ ಮುಖ್ಯ ಅಧ್ಯಾಪಿಕೆಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದರು. ತಮ್ಮ ವಿದ್ಯಾಭ್ಯಾಸ ಜೊತೆಗೆ ಚಿತ್ರಕಲೆಯನ್ನೂ ರೂಢಿಸಿಕೊಂಡರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಸಾಹಿತ್ಯಕಾರ ಸಂಸದ ಎಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿದವರು ಇವರೇ, ಇವರು ಹೈಸ್ಕೂಲ್ ಮುಗಿಸುವ ಹೊತ್ತಿಗೆ ತಮ್ಮ ರಹಸ್ಯವಾದಿ ಭಾವನೆಗಳಿಂದೊಡಗೂಡಿದ ಅನೇಕ ಕವನಗಳನ್ನು ರಚಿಸಿದ್ದರು. ಇವನ್ನು ಇವರ ಮೊದಲ ಕೃತಿ ನೀಹಾರದಲ್ಲಿ ಕಾಣಬಹುದು. ನೀಹಾರ (1930) ರಶಿಮ (1932), ನೀರಜಾ (1934) ಸಾಂಧ್ಯ ಗೀತ (1936) ಈ ನಾಲ್ಕೂ ಕಾವ್ಯಗಳ ಸಂಗ್ರಹ, ಯಾಮ (1939), ದೀಪಶಿಖಾ (1942), ಅಧುನಿಕ ಕವಿ (ಸಂಗ್ರಹ 1946). ಸಪ್ತಪರ್ಣಾ (1060), ಸಂಧಿನೀ (ಸಂಗ್ರಹ 1964)- ಇವು ಇವರ ಇತರ ಕಾವ್ಯಸಂಕಲನ ಹಾಗೂ ಸಂಗ್ರಹಗಳು. 

	ಅತೀತ ಕೇ ಚಲನಚಿತ್ರ (1940), ಸ್ಮøತಿಕೀ ರೇಖಾಯೇಂ (1943); ಶೃಂಖಲಾ ಕೀ ಖಿಡಿಯಾಮ್ (1950), ಪಥ ಕೇ ಸಾಥೀ, ಮೇರಾ ಪರಿಷತ್ ಅವಸ್ಥೆಗಳನ್ನು ಮತ್ತು ಓರ್ವ ಸಾಧಕ ಅನುಭಾವಿಯ ಸಾಧನೆಯ ವಿಭಿನ್ನ ಸೋಪಾನಗಳನ್ನು ಅತ್ಯಂತ ಸರಸ ಮತ್ತು ವ್ಯಂಜಕತೆ ವಿಪುಲವಾಗಿವೆ. ನಿಸರ್ಗ ಇಲ್ಲಿ ಉದ್ದೀಪನ ಮತ್ತು ಅಲಂಕಾರ ಹಾಗೂ ಪ್ರತೀಕವಾಗಿ ಬಳಸಲ್ಪಟ್ಟಿದೆ. ಕವನಗಳ ಭಾವಾಭಿ ವ್ಯಕ್ತಿಯನ್ನು ಪ್ರಭಾವಶಾಲಿಗೊಳಿಸಲು ಇವರು ತಮ್ಮ ಉತ್ತಮ ಚಿತ್ರಕಲೆಯನ್ನು ಬಳಸಿಕೊಂಡಿದ್ದಾರೆ. ಕಾವ್ಯದಲ್ಲಿರುವ ಕರುಣರಸ, ಕೋಮಲಭಾವ, ಭಾವಗೀತದ ಗೇಯತೆ ಇವುಗಳಿಂದಾಗಿ ಇವರ ಕಾವ್ಯಗಳು ತುಂಬ ಜನಪ್ರಿಯವಾಗಿದ್ದರೂ ರಹಸ್ಯವಾದಿ ಪ್ರತೀಕಗಳು ಮತ್ತು ದಾರ್ಶಕನಿಕತೆಯ ಅಧಿಕ್ಯದಿಂದಾಗಿ ಕೆಲವೆಡೆ ಕಾವ್ಯ ಕ್ಲಿಷ್ಟವಾಗಿ ಕಾಣುತ್ತದೆ. 

	ಅತೀತ ಕೇ ಚಲನಚಿತ್ರ ಮೊದಲಾದ ಗದ್ಯಗ್ರಂಥಗಳು ವ್ಯಕ್ತಿ ಚಿತ್ರಗಳ ಶ್ರೇಣಿಗೆ ಸೇರಿದ ಪ್ರಸಿದ್ಧ ಕೃತಿಗಳು, ಇವರ ಕವನಗಳು, ಆತ್ಮಕೇಂದ್ರಿತವಾಗಿದ್ದರೂ ಗದ್ಯಕೃತಿಗಳು ಸಮಾಜ ಕೇಂದ್ರಿತವಾಗಿರುವುದು ಒಂದು ವೈಶಿಷ್ಟ್ಯ, ಕವನಗಳಲ್ಲಿ ಕಲ್ಪನೆಯೇ ಪ್ರಧಾನವಾದರೆ ಗದ್ಯದಲ್ಲಿ ವಾಸ್ತವಿಕತೆಯೇ ಪ್ರಧಾನವಾಗಿದೆ. ಮಹಾದೇವಿಯವರು ಗ್ರಾಮೀಣ ಪ್ರದೇಶದ ಶೋಷಿತ ದೀನ ದಲಿತರೊಡನೆ ನಿಕಟ ಸಂಪರ್ಕ ಹೊಂದಿ ಅವರ ಸುಖದುಃಖಗಳನ್ನರಿತು ಅವರ ಕಡು ಬಡತನ, ಅಜ್ಞಾನ ಮೊದಲಾದವನ್ನು ವ್ಯಕ್ತಿಚಿತ್ರದಲ್ಲಿ ತೋರಿಸಿದ್ದಾರೆ. ಇಂದಿನ ಸಮಾಜದ ನಾರಿಯರ ಬಹುಮುಖ ಸಮಸ್ಯೆಗಳೂ ಇವುಗಳಲ್ಲಿ ಮೂಡಿಬಂದಿವೆ. ಪಾತ್ರಚಿತ್ರಣದಲ್ಲಿ ಮನೋವೈಜ್ಞಾನಿಕ ಶೈಲಿಯನ್ನು ಬಳಸಿದ್ದಾರೆ. ಪಥ ಕೇ ಸಾಥೀ ಎಂಬ ಗ್ರಂಥದಲ್ಲಿ ಸಮಕಾಲೀನ ಲೇಖಕರ ಸುಂದರ ವ್ಯಕ್ತಿಚಿತ್ರಗಳಿವೆ. ಗದ್ಯದ ಶೈಲಿ ಸರಳವೂ ಅಕರ್ಷಕವೂ ಕಾವ್ಯದ ಗೇಯತೆಯಿಂದ ಕೂಡಿದುದೂ ಆಗಿದೆ. 1956ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿಯೂ 1982ರಲ್ಲಿ ಪ್ರಶಸ್ತಿಯೂ (ಯಾಮಾ ಕವನ ಸಂಕಲ) ಲಭಿಸಿವೆ.	
											(ಆರ್,ಎ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ